ಅಳಿವೆ
ನದೀಮುಖಜಭೂಮಿಯಲ್ಲಿ ನೆಲ ತಗ್ಗಾಗಿರುವುದರಿಂದಲೋ ಅಥವಾ ಸಮುದ್ರ ಮಟ್ಟ ಎತ್ತರವಾಗಿರುವುದರಿಂದಲೋ ಸಮುದ್ರದ ನೀರು ನದೀಮುಖದ ಒಳಕ್ಕೆ ನುಗ್ಗಿ ಬರುತ್ತಿದ್ದರೆ ಅಂಥ ಪ್ರದೇಶವನ್ನು ಅಳಿವೆಯೆಂದು ಕರೆಯುತ್ತಾರೆ. ಇದಕ್ಕೆ ಫರ್ತ್ ಮತ್ತು ಫಿಯರ್ಡ್ ಎಂಬ ಹೆಸರೂ ಉಂಟು. ಥೇಮ್ಸ್ ಮತ್ತು ಎಲ್ಬ್ ನದಿಗಳ ಮುಖಭಾಗಗಳಲ್ಲಿ ಒಳ್ಳೆಯ ಅಳಿವೆಗಳಿವೆ. ಅನೇಕ ಅಳಿವೆಗಳಲ್ಲಿ ಉತ್ತಮ ರೇವುಪಟ್ಟಣಗಳು ಕಂಡುಬರುತ್ತವೆ.
(ಎಂ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ